ದೀಪಕ್ ಡಿ'ಸಿಲ್ವಾ ಅಲಿಯಾಸ್ ದೀಪಕ್ ಪಾಲಡ್ಕ( )(ಜನನ:೧೧ ಏಪ್ರಿಲ್), ಇವರು ಭಾರತೀಯ ಚಲನಚಿತ್ರ ನಟ ಮತ್ತು ರಂಗ ಕಲಾವಿದ. ತುಳು ಸಿನೆಮೋತ್ಸವ ೨೦೧೫ ರಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ ೫ ಪ್ರಶಸ್ತಿಗಳನ್ನು ಗೆದ್ದರಿರುವ ನಿರೆಲ್ ಎಂಬ ತುಳು ಚಲನಚಿತ್ರದ ಮೂಲಕ ರಂಗಭೂಮಿಗೆ ಕಾಲಿಟ್ಟ ಇವರು ದಂಡ್(ತುಳು) , ಅಸತೋಮ ಸದ್ಗಮಯ(ಕನ್ನಡ), ಬೆಂಡ್ಕಾರ್(ಕೊಂಕಣಿ),ಏಕ್ ಅಸ್ಲ್ಯಾರ್ ಏಕ್ ನ (ಕೊಂಕಣಿ),ಜ಼ಾವೋಯ್ ನಂಬರ್ 1 (ಕೊಂಕಣಿ), ಅಮ್ಮೆರ್ ಪೋಲಿಸಾ(ತುಳು) ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. == ಜನನ, ಆರಂಭಿಕ ಜೀವನ ಮತ್ತು ಶಿಕ್ಷಣ == ದೀಪಕ್ ಪಾಲಡ್ಕ ಇವರು ಜಾರ್ಜ್ ಡಿ'ಸಿಲ್ವಾ (ತಂದೆ) ಮತ್ತು ಫಿಲೊಮೆನಾ (ತಾಯಿ) ದಂಪತಿಗೆ ೧೧ ಏಪ್ರಿಲ್ ೧೯೭೪ ರಂದು ಮೂಡುಬಿದಿರೆಯ ಪಾಲಡ್ಕದಲ್ಲಿ ಜನಿಸಿದರು. ಇವರು ತಮ್ಮ ಪ್ರೌಢ ಶಿಕ್ಷಣವನ್ನು ಮೂಡುಬಿದಿರೆಯ ಜೈನ ಪ್ರೌಢ ಶಾಲೆಯಲ್ಲಿ ಪಡೆದು ಅಲ್ಲಿನ ಮಹಾವೀರ ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಪಡೆದರು. ನಂತರ ಮುಂಬೈನ ಕೈಝನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತ್ತಕೋತ್ತರ ಪದವಿ(ಎಂ.ಬಿ.ಎ) ಪೂರ್ಣಗೊಳಿಸಿದರು. ರಂಗನಟನಾಗಿ, ಇವರು ಸುಮಾರು ೧೫-೨೦ ಕೊಂಕಣಿ, ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು 105.4 ರೇಡಿಯೊ ಮಸಾಲೆ ದುಬೈ ಮತ್ತು 93.5 ರೆಡ್ ಎಫ್‌ಎಂ ನಲ್ಲಿ ರೇಡಿಯೊದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. === ವೃತ್ತಿಜೀವನ === ಸ್ಟೇಜ್ ಶೋಗಳಲ್ಲಿ ಮತ್ತು ರೇಡಿಯೊದಲ್ಲಿ ಕಾಣಿಸಿಕೊಂಡ ನಂತರ ದೀಪಕ್ ಪಾಲಡ್ಕ ಮೊದಲಿಗೆ ಅಂತರರಾಷ್ಟ್ರೀಯ ತುಳು ಚಿತ್ರ ನಿರೆಲ್ ನಲ್ಲಿ ಪ್ರಮುಖ ಹಾಸ್ಯ ನಟನಾಗಿ ಪಾದಾರ್ಪಣೆ ಮಾಡಿದರು. ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಿಸಲಾಯಿತು. ನಂತರ ದಂಡ್ ಸಿನಿಮಾದಲ್ಲಿ ಅರ್ಜುನ್ ಕಾಪಿಕಾಡ್ರ ಜೊತೆ ಹಾಸ್ಯ ನಟನಾಗಿ ಕಾಣಿಸಿಕೊಂಡರು.ಇದು ಆಸ್ಟ್ರೇಲಿಯಾ ಮತ್ತು ಯು.ಕೆ ಗಳಲ್ಲಿ ಬಿಡುಗಡೆಯಾದ ಮೊದಲ ತುಳು ಭಾಷೆಯ ಚಲನಚಿತ್ರವಾಗಿದೆ. ದೀಪಕ್ ಪಾಲಡ್ಕ ರವರ ಕೊಂಕಣಿ ಚಿತ್ರ ಏಕ್ ಅಸ್ಲ್ಯಾರ್ ಏಕ್ ನಾ, ಸವೋಯ್ ನಂಬರ್ ೧ (೨೦೧೮), ಬೆಂಡ್ಕಾರ್ (೨೦೧೯) ಎಂಬ ಚಿತ್ರಗಳು ಯು.ಎ.ಇ, ಇಸ್ರೇಲ್, ಕುವೈಟ್ ಮತ್ತು ಭಾರತದಲ್ಲಿ ಬಿಡುಗಡೆಯಾಗಿದೆ. ಇವರು ಕನ್ನಡ ಸಿನಿಮಾ ಅಸತೋಮ ಸದ್ಗಮಯ ದಲ್ಲೂ ನಟಿಸಿದ್ದಾರೆ. == ಅಭಿನಯಿಸಿದ ಸಿನಿಮಾಗಳ ಪಟ್ಟಿ == === ತುಳು ಸಿನಿಮಾಗಳು === === ಕೊಂಕಣಿ ಸಿನಿಮಾಗಳು === === ಕನ್ನಡ ಸಿನಿಮಾಗಳು === == ಉಲ್ಲೇಖಗಳು ==